ನಮ್ಮ ಶಾಲಾ ಆವರಣ

ಗ್ರಂಥಾಲಯ
ಶಾಲೆಯಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದ್ದು ಸುಮಾರು ೫೦೦೦ ಕ್ಕೂ ಅಧಿಕ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಇಂಗ್ಲೀಷ್ , ಹಿಂದಿ, ಮರಾಠಿ, ಹಾಗೂ ಕನ್ನಡ ದೈನಿಕಗಳಲ್ಲದೆ ವಾರಪತ್ರಿಕೆ ಮತ್ತು ಮಾಸಿಕಗಳೂ ದೊರೆಯುತ್ತವೆ.


ನಿಯಮಗಳು:
* ಗ್ರಂಥಾಲಯದಲ್ಲಿ ಸಂಪೂರ್ಣ ನಿಶ್ಯಬ್ಧವಾಗಿ ವರ್ತಿಸಬೇಕು.
*ವಿದ್ಯಾರ್ಥಿಗಳು ಶಾಲೆಯ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಗ್ರಂಥಾಲಯದಲ್ಲಿ ಓದಿದ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳು ಅಥವಾ ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಯಾವುದಾದರೂ ಮೂರು ಪುಸ್ತಕಗಳ ಕುರಿತು ಪುನರಾವಲೋಕನವನ್ನು ಬರೆಯತಕ್ಕದ್ದು.
* ೫ ರಿಂದ ೯ ನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ೭ ದಿನಗಳ ಅವಧಿಗೆ ಕೊಡಲಾಗುವುದು. ಆ ಪುಸ್ತಕಕ್ಕೆ ಬೇರೆ ಯಾರೂ ಬೇಡಿಕೆಯನ್ನು ಸಲ್ಲಿಸದಿದ್ದಲ್ಲಿ ಪುನಃ ಒಂದು ವಾರದ ಅವಧಿಗೆ ಆ ಪುಸ್ತಕವನ್ನು ಕೊಡಲಾಗುವುದು.
* ಪುಸ್ತಕವನ್ನು ಜಾಗೃತೆಯಾಗಿ ಜೋಪಾನವಾಗಿಡಬೇಕು. ಪುಸ್ತಕ ಹಾಳಾದಲ್ಲಿ ಅಥವಾ ಕಳೆದುಹೋದಲ್ಲಿ ಅದರ ಹಣವನ್ನು ಕೊಡಬೇಕಾಗುತ್ತದೆ. ಅಥವಾ ಹೊಸ ಪುಸ್ತಕವನ್ನು ಕೊಡಬೇಕಾಗುತ್ತದೆ.
* ಪುಸ್ತಕದ ಯಾವುದೇ ಹಾಳೆಯನ್ನು ಹರಿಯುವಂತಿಲ್ಲ.

ಸಂಗಣಕ ಪ್ರಯೋಗಾಲಯ:
80 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸುಸಜ್ಜಿತವಾದ ಬಹು ಉದ್ದೇಶಿತ ಸಂಗಣಕ ಕಲಿಕೆಯು ಮೊದಲ ಮಹಡಿಯಲ್ಲಿದ್ದು  ಇದರಲ್ಲಿ ಒಟ್ಟು 40 ಸಂಗಣಕಗಳಿವೆ. ಇದರಲ್ಲಿ ಅತೀ ಸೂಕ್ಷ್ಮ ವಿಷಯಗಳನ್ನು ಕೂಲಂಕುಷವಾಗಿ ಬೋಧಿಸಲಾಗುತ್ತದೆ. 1 ರಿಂದ 8ನೇ ತರಗತಿಯವರೆಗೆ ನಮ್ರವಾದ ಸುಲಭ ವಿದ್ಯಾಭ್ಯಾಸ ಕ್ರಮವಿದ್ದು 9 ನೇ ಮತ್ತು 10 ನೇ ತರಗತಿಯವರೆಗೆ ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಮಂಡಳಿಯ ಕ್ರಮದಂತಿದೆ.

ಇ-ಕಲಿಕೆ/ ಸಂಖ್ಯಾತ್ಮಕ ತರಗತಿ:
ಸಂಖ್ಯಾತ್ಮಕ ತರಗತಿ ತಂತ್ರಜ್ಞಾನವು ಬೋಧನಾ ಕಲಿಕಾ  ಪ್ರಕ್ರಿಯೆಯ ಭಾಗವಾಗಿದ್ದು ಎಲ್ಲಾ ತರಗತಿಗಳು ಸಂಖ್ಯಾತ್ಮಕವಾಗಿದ್ದು ಟೀಚ್ ನೆಕ್ಸ್ಟ ಎಜ್ಯುಕೇಶನ್ ಇಂಡಿಯಾ ನಿಯಮಿತ ಇವರು ಮಾಧ್ಯಮಿಕ ಹಾಗೂ ಉಚ್ಚ ಮಾಧ್ಯಮಿಕ ವಿಭಾಗದವರಿಗೆ ಸಾಫ್ಟವೇರ್ ಕೊಡಮಾಡಿದ್ದಾರೆ.

ಐ-ಕೇರ್ ಪ್ರಯೋಗಾಲಯ(ಅನುದಾನಿತ, ಅನುಕೂಲಿತ ಸಂಗಣಕದಿಂದ ಸ್ಥೂಲ ಶಿಕ್ಷಣ)
ಐ-ಕೇರ್ ಪ್ರಯೋಗಾಲಯದಲ್ಲಿ ಒಟ್ಟು 90 ಸಂಗಣಕಗಳಿದ್ದು ವಿದ್ಯಾರ್ಥಿಗಳಿಗೆ ಸ್ವ-ಅಧ್ಯಯನ ಮತ್ತು ಸ್ವಯಂ ಮೌಲ್ಯಮಾಪನವನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು 2012-13 ರ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಗೆ ಪರಿಚಯಿಸಿದ ಮಾಹಿತಿ ಸಂವಹನ ತಂತ್ರಜ್ಞಾನವನ್ನು ಕಲಿಸಲಾಗುತ್ತಿದೆ.


ಸಭಾಗೃಹ :
ಶಾಲೆಯ ತಳಮಹಡಿಯಲ್ಲಿ ಸುಂದರ ಸಭಾಗೃಹವಿದ್ದು ಸುಮಾರು 500 ಜನರು ಕುಳಿತುಕೊಳ್ಳುವ ಅವಕಾಶವಿದ್ದು ಶಾಲೆಯ ಎಲ್ಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ಸಭಾಗೃಹದಲ್ಲಿ ಜರುಗುವುದು.


ಆಟದ ಮೈದಾನ:
ಶಾಲೆಯಲ್ಲಿ ಸುಂದರವಾದ ಆಟದ ಮೈದಾನವಿದೆ. ಇದರಲ್ಲಿ ಆಟೋಟದ ಸ್ಪರ್ಧೆಗಳು ಜರುಗುತ್ತವೆ. ವಾಲಿಬಾಲ್ ಅಂಗಣ, ಚಲಿಸುವ ಬಾಸ್ಕೆಟ್ ಬಾಲ್ ಪೀಠ , ಉದ್ದ ಜಿಗಿತದ ಹೊಂಡ , ಮತ್ತು ಗುಂಡು ಎಸೆತದ ಸ್ಥಳಗಳು ಈ ಮೈದಾನದಲ್ಲಿವೆ.