ಪೂರ್ವ ಪ್ರಾಥಮಿಕ ವಾರ್ಷಿಕ ವರದಿ

ವಾರ್ಷಿಕ ವರದಿ  2011-12
ಪೂರ್ವ ಪ್ರಾಥಮಿಕ ಶಿಕ್ಷಣವು ಮಗುವಿಗೆ ಅತೀ ಪ್ರಾಮುಖ್ಯವಾಗಿದ್ದು ಪ್ರಾಥಮಿಕ ಶಾಲೆಯನ್ನು ಸೇರುವ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿದೆ.
ನಮ್ಮ ಶಾಲೆಯು ವಿದ್ಯಾರ್ಥಿಗಳ ಅಭಿವೃದ್ಧಿಗೆ ಎಳವೆಯಲ್ಲೇ ಪ್ರಯತ್ನಿಸುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣವು ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಹೆಚ್ಚು ಸ್ವಾತಂತ್ರ್ಯತೆ ಹಾಗೂ ಆತ್ಮವಿಶ್ವಾಸವನ್ನು ತರುತ್ತದೆ. ಪುಟಾಣಿಗಳು ಸಂಭಾಷಣೆ, ಮಾತುಕತೆಯ ಮುಖಾಂತರ ಮೌಲ್ಯಾಧಾರಿತ ಪಠ್ಯವನ್ನು ಕಲಿಯುವರು. ಶಿಕ್ಷಣದ ಮುಖ್ಯ ಉದ್ದೇಶವೆಂದರೆ ಮಕ್ಕಳನ್ನು ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ತಯಾರು ಮಾಡುವುದು.
ನಮ್ಮ ಪಠ್ಯ ವಸ್ತುವು ಸಾಮಾನ್ಯ ಗಣಿತದೊಂದಿಗೆ ವರ್ಣಮಾಲೆ ಹಾಗೂ ವರ್ಕ್ ಶೀಟ್ ನ ಮುಖಾಂತರ ತಿಳಿಸಿಕೊಟ್ಟು ಅವರ ಸಮಸ್ಯೆಗಳನ್ನು ಪರಿಹರಿಸಿ ಅವರಲ್ಲಿರುವ ಪ್ರತಿಭೆಯನ್ನು ವಿವಿಧ ಚಟುವಟಿಕೆ ನಿರೀಕ್ಷಣೆ ಹಾಗೂ ಭಾವನೆಯನ್ನು ವ್ಯಕ್ತಪಡಿಸುವ ಮುಖಾಂತರ ಹೊರತರಲಾಗುವುದು.
ಇಂಗ್ಲಿಷ್ ಕಲಿಯುವ ಸಂದರ್ಭದಲ್ಲಿ  ಧ್ವನಿಶಾಸ್ತ್ರವನ್ನು ಬಳಸಲಾಗುವುದು. ಆ ಮೂಲಕ ಮಕ್ಕಳು ಓದುವ ಬರೆಯುವ ಪದದ ಅಕ್ಷರಗಳನ್ನು ತಿಳಿಸುವರು. ನಮ್ಮ ಪರಿಸರದಲ್ಲಿಯ ಪ್ರಾಣಿಗಳನ್ನು ಸಸ್ಯಗಳನ್ನು ನಿರೀಕ್ಷಿಸುವ ಮೂಲಕ ಅದರ ರಕ್ಷಣೆಯನ್ನು ಮಾಡುವ ಮಾನವ ಶರೀರ, ಆಹಾರ, ಪ್ರಾಣಿಗಳು, ಪರಿಸರ ಸಂಸ್ಕೃತಿ , ಹಬ್ಬಗಳು, ನೆರೆಹೊರೆಗಳ ಕುರಿತು ಪರಿಚಯಿಸುವುದು.

ನಾವು ಗೋಕುಲಾಷ್ಟಮಿ, ಗೋವಿಂದಾ, ರಕ್ಷಾಬಂಧನ , ಗಣೇಶ ಚತುರ್ಥಿ, ಸರಸ್ವತಿ ಪೂಜೆ, ದೀಪಾವಳಿ ಹಾಗೂ ಕ್ರಿಸ್ ಮಸ್ ಹಬ್ಬದ ಆಚರಣೆಯೊಂದಿಗೆ ಸಾಂಸ್ಕೃತಿಕ ಮೌಲ್ಯವನ್ನು ಬೋಧಿಸುವುದು , ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರೊಂದಿಗೆ ದೇಶಭಕ್ತಿಯ ಮೌಲ್ಯವನ್ನು ಬೆಳೆಸುವುದು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರಲು ಕಂಠಪಾಠ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ, ಚಿತ್ರಕಲೆ, ಬೌದ್ಧಿಕ ಬುದ್ದಿಮತ್ತೆ, ಸಂಗೀತ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸುವುದಲ್ಲದೆ ಶೈಕ್ಷಣಿಕ ಪ್ರವಾಸ, ಕ್ಷೇತ್ರದರ್ಶನ, ವಾರ್ಷಿಕೋತ್ಸವ, ಕ್ರೀಡಾ ದಿನ, ಮತ್ತು ಛದ್ಮವೇಷ ಮೊದಲಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವರು.
ಪಾಲಕರ ಸಭೆಯು ಶಿಕ್ಷಕರ ಹಾಗೂ ಪಾಲಕರ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ. ನಮಗೆ ಬೆಂಬಲ ಹಾಗೂ ಮಾರ್ಗದರ್ಶನವನ್ನಿತ್ತ ಎಲ್ಲಾ ಪಾಲಕರಿಗೆ, ಶಿಕ್ಷಕರಿಗೆ, ಹಿತೈಷಿಗಳಿಗೆ, ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲರಿಗೂ ನಮ್ಮ ಹೃದಯಪೂರ್ವಕ ಕೃತಜ್ಞತೆಗಳು.