ಪ್ರಾಥಮಿಕ ವಿಭಾಗಕ್ಕೆ ಪ್ರವೇಶ

ಪ್ರವೇಶ:
* ಹೊಸ ದಾಖಲಾತಿಯು ಲಭ್ಯವಿರುವ ಸೀಟುಗಳು ಹಾಗೂ RTE ಕಾಯ್ದೆ 2009ರಂತೆ
* ದಾಖಲಾತಿಯು ಮೊದಲು ಬಂದವರಿಗೆ ಮೊದಲ  ಪ್ರವೇಶ ಹಾಗೂ ಕನ್ನಡಿಗರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.
* ಒಂದನೇ ತರಗತಿಗೆ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಯು ಮಹಾನಗರ ಪಾಲಿಕೆ ಅಥವಾ  ಗ್ರಾಮ ಪಂಚಾಯತ್ನ ಮೂಲ ಜನನ ಪ್ರಮಾಣ ಪತ್ರವನ್ನು ಒಪ್ಪಿಸಬೇಕು.
* ಮೂಲ ಜನನ ಪ್ರಮಾಣ ಪತ್ರವು ಶಿಕ್ಷಣ ವಿಭಾಗದ ಸೂಚನೆಯಂತೆ ಶಾಲೆಯಲ್ಲೇ ಇರುವುದು.
* ಪೋಷಕರು ಹಾಗೂ ಪಾಲಕರು ದಾಖಲಾತಿಯ ಸಂದರ್ಭದಲ್ಲಿ ಒದಗಿಸುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬತಕ್ಕದ್ದು.
* ಮೊದಲನೆಯ ತರಗತಿಗೆ ಸೇರುವ ವಿದ್ಯಾರ್ಥಿಯ ವಯಸ್ಸು ಜೂನ್‌ 15ಕ್ಕೆ 5 ವರ್ಷ ತುಂಬಿರತಕ್ಕದ್ದು.


ಪ್ರವೇಶ ಹಿಂತೆಗೆತ:
* ಶಾಲೆಯನ್ನು ಬಿಡುವ ವಿದ್ಯಾರ್ಥಿಯು ಶಾಲೆಯು ಒದಗಿಸುವ ಅರ್ಜಿಯನ್ನು ಸರಿಯಾಗಿ ತುಂಬಿಸಿ ಆ ತಿಂಗಳ ಪೂರ್ತಿ ಶುಲ್ಕವನ್ನು ತುಂಬತಕ್ಕದ್ದು.
* ವಿದ್ಯಾರ್ಥಿಯು ಶಾಲೆಯನ್ನು ಬಿಡಲು ಇಚ್ಛಿಸಿದಲ್ಲಿ ಪಾಲಕರ ಸಹಿಯೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಿದ ಎಂಟು ದಿನದ ತರುವಾಯ ವರ್ಗಾವಣಾ ಪತ್ರವನ್ನು ನೀಡಲಾಗುವುದು.
* ಶಾಲೆಯ ಎಲ್ಲಾ ಶುಲ್ಕವನ್ನು ತುಂಬಿದ ನಂತರ ವರ್ಗಾವಣಾ ಪತ್ರವನ್ನು ನೀಡಲಾಗುವುದು.

ರಜೆ ಮತ್ತು ಗೈರು ಹಾಜರಿಯ ನಿಯಮಗಳು:
* ದಿನಂಪ್ರತಿ ಹಾಜರಿಯು ಅಗತ್ಯ.
* ಶಾಲಾ ಪ್ರವೇಶ ದಿನ ಹಾಗೂ ಕೊನೆಯ ದಿನದ ಹಾಜರಾತಿಯು ಕಡ್ಡಾಯವಾಗಿದೆ.
* ವಿದ್ಯಾರ್ಥಿಯು ಮೂರು ದಿನಗಳ ಕಾಲ ಗೈರು ಹಾಜರಾದರೆ ಹ್ಯಾಂಡ್ ಬುಕ್ ನಲ್ಲಿ ಬರೆದು ತರಬೇಕು. ಹಾಗೂ ಮೂರು ದಿನಗಳಿಗಿಂತ ಹೆಚ್ಚು ಗೈರು ಹಾಜರಾದಲ್ಲಿ ಶಾಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.
* ವಿದ್ಯಾರ್ಥಿಯು ಅನಾರೋಗ್ಯವಾಗಿ ಒಂದು ವಾರಕ್ಕಿಂತ ಹೆಚ್ಚು ಕಾಲ ಗೈರು ಹಾಜರಾದರೆ ಎರಡು ದಿನದ ಒಳಗಡೆ  ವೈದ್ಯರ ಪ್ರಮಾಣ ಪತ್ರದೊಂದಿಗೆ ಮುಖ್ಯೋಪಾಧ್ಯಾಯರಿಗೆ ತಿಳಿಸತಕ್ಕದ್ದು.
* ವಿದ್ಯಾರ್ಥಿಯು ಅಂಟುರೋಗಕ್ಕೆ ತುತ್ತಾದಾಗ ಅವನನ್ನು ಶಾಲೆಯ ಸಂದರ್ಭದಲ್ಲಿ ಅಥವಾ ಪರೀಕ್ಷೆಯ ಸಂದರ್ಭದಲ್ಲಿ ಶಾಲೆಗೆ ಕಳುಹಿಸಬಾರದು. ಹಾಗೂ ರೋಗ ಮುಕ್ತರಾದುದಕ್ಕೆ ವೈದ್ಯರ ಪ್ರಮಾಣ ಪತ್ರದೊಂದಿಗೆ ಶಾಲೆಗೆ ಪುನಃ ಬರತಕ್ಕದ್ದು.

ಪ್ರಮಾಣ ಪತ್ರದ ಹಂಚಿಕೆ:
* ವರ್ಗಾವಣಾ ಪ್ರಮಾಣ ಪತ್ರ ಅಥವಾ ಇನ್ನಾವುದೇ ಪ್ರಮಾಣ ಪತ್ರವು ಪಾಲಕರ ಲಿಖಿತ ಅರ್ಜಿ ಇದ್ದಾಗ ಮಾತ್ರ ಕೊಡಲಾಗುತ್ತದೆ.
* ನಕಲು ವರ್ಗಾವಣಾ ಪತ್ರಕ್ಕೆ ನೂರು ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ.
* ಜನನ ಪ್ರಮಾಣ ಪತ್ರವನ್ನು ಶಾಲೆಯ ದಾಖಲಾತಿಯಂತೆ ನೀಡಲಾಗುವುದು ಅದಕ್ಕೆ 25 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.
* ಯಾವುದೇ ಪ್ರಮಾಣ ಪತ್ರವನ್ನು ಅರ್ಜಿ ಕೊಟ್ಟ ಏಳು ದಿನದ ನಂತರ ಕೊಡಲಾಗುತ್ತದೆ.
* ವರ್ಗಾವಣಾ ಪ್ರಮಾಣ ಪತ್ರವನ್ನು ಶಾಲಾ ಶುಲ್ಕವನ್ನು ಕಟ್ಟಿದ ನಂತರ ಕೊಡಲಾಗುತ್ತದೆ.
ಮೌಲ್ಯಮಾಪನ:
* ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಹಾಗೂ ಸಮಾಜದಲ್ಲಿ ಮಾನವೀಯತೆಯ ಬೆಳವಣಿಗೆ ಈ ಮೌಲ್ಯಗಳು ಪ್ರಾಥಮಿಕ ಶಿಕ್ಷಣದ ಉದ್ದೇಶಗಳಾಗಿವೆ.
* ವಿದ್ಯಾರ್ಥಿಗಳ ಬೆಳವಣಿಗೆಯನ್ನು ಒಳ್ಳೆಯ ಗುಣ ನಡತೆಯನ್ನು ಹೊರತರುವಂತಹ ಸತತ ಸಮಗ್ರ ಮಾದರಿಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಬೆಳವಣಿಗೆಯ ಮಾಪನವನ್ನು ಮಾಡಲಾಗುವುದು. ಇದನ್ನು ಸಂಕಲಿತ ಹಾಗೂ ಅಕಾಲಿಕ ಮೌಲ್ಯಮಾಪನದಿಂದ ಮಾಡಲಾಗುವುದು.
ವಿದ್ಯಾರ್ಥಿ ವೇತನ:
* ಪಾರಿತೋಷಕ ಮತ್ತು ಪ್ರತಿಭಾ ಪ್ರಮಾಣ ಪತ್ರವನ್ನು ಆಯಾ ತರಗತಿಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ನೀಡಲಾಗುವುದು.
* ಕೆಲವೊಂದು ಅರ್ಹ , ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಾಲಾ ಕಾರ್ಯಕಾರಿ ಸಮಿತಿಯು ಕೊಡಮಾಡುವ ಶಾಲಾ ಶುಲ್ಕವನ್ನು , ಉಚಿತ ಸಮವಸ್ತ್ರ ಹಾಗೂ ಉಚಿತ ಟಿಪ್ಪಣಿ ಪುಸ್ತಕಗಳನ್ನು ನೀಡಲಾಗುವುದು.
* ಪಾಲಕರು ತಮ್ಮ ಮಕ್ಕಳ ಪ್ರಗತಿಯ ಕುರಿತಾಗಿ ಪಾಲಕ ಶಿಕ್ಷಕ ಸಭೆಯಲ್ಲಿ ಮಾತನಾಡಬಹುದು.
ಪಾಲಕರಲ್ಲಿ ವಿನಂತಿ:
* ಪಾಲಕರು ತಮ್ಮ ಮಕ್ಕಳ ವಿಷಯದ ಹಿಂದುಳಿದಿರುವಿಕೆ, ನಡವಳಿಕೆ, ಹಾಗೂ ಗುಣನಡತೆಗಳ ಕುರಿತು ತಿಳಿಸಿದರೆ ಅದಕ್ಕೆ ಸರಿಯಾ ಕ್ರಮವನ್ನು ತೆಗೆದುಕೊಳ್ಳಬೇಕು.
* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ  ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡಲಾಗುವುದು.  ಪಾಲಕರು    ತಮ್ಮ ಮಕ್ಕಳು ಈ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
* ಹ್ಯಾಂಡ್ ಬುಕ್ ನಲ್ಲಿರುವ ಸೂಚನೆಗಳಿಗೆ ಸಹಿಯನ್ನು ಹಾಕಬೇಕು.
* ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ಮತ್ತು ಉತ್ತಮ  ಹವ್ಯಾಸವನ್ನು ಬೆಳೆಸಲು ಉಪದೇಶಿಸುವುದು.
* ಹ್ಯಾಂಡ್ ಬುಕ್‌ನಲ್ಲಿರುವ ಮಕ್ಕಳ ವಿವಿಧ ಮಾಹಿತಿಗಳನ್ನು ದಿನಂಪ್ರತಿ ಪರಿಶೀಲಿಸಬೇಕು.
* ಮಕ್ಕಳಿಗೆ ಟಿಪ್ಪಣಿ ಪುಸ್ತಕ ಹಾಗೂ ಹ್ಯಾಂಡ್ ಬುಕ್ ನ ಸ್ವಚ್ಛತೆ ಹಾಗೂ ಶುಚಿಯಾಗಿಡಲು ಒತ್ತಾಯಿಸತಕ್ಕದ್ದು.
* ಶಾಲಾಧಿಕಾರಿಗಳು ತಿಳಿಸಿದ ದಿನ ಮತ್ತು ಸಮಯವನ್ನು ಗಮನಿಸತಕ್ಕದ್ದು.
* ಸಂದರ್ಶನದ ಸಮಯವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
* ವಿದ್ಯಾರ್ಥಿಗಳು ಶಾಲೆಗೆ ಲೋಹದ ಶೈಕ್ಷಣಿಕ ಸಾಮಾಗ್ರಿಗಳನ್ನು ತರಬಾರದು. ಅದಕ್ಕೆ ಬದಲಾಗಿ ಮರದ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತರತಕ್ಕದ್ದು.
* ಮಕ್ಕಳ ದಿನ ಶಿಕ್ಷಕರ ದಿನ , ಕ್ರೀಡಾ ದಿನ, ಸ್ವಾತಂತ್ರ್ಯ ದಿನ  ಹಾಗೂ ಗಣರಾಜ್ಯ ದಿನಗಳಂದು ಹಾಜರಾತಿಯು ಕಡ್ಡಾಯ.
* ಶೈಕ್ಷಣಿಕ ವಿಷಯದ ಹೊರತು ಪಾಲಕರು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳು ದೇಶಭಕ್ತಿ , ಶ್ರದ್ಧೆ ಮತ್ತು ನಂಬಿಕೆ ಪ್ರಾಮಾಣಿಕತೆ , ಸ್ವಗೌರವ ಹಾಗೂ ನಿಸ್ವಾರ್ಥ ಸೇವೆಗಳ ಕುರಿತು ತಿಳಿಸಬೇಕು.