ಮಾಧ್ಯಮಿಕ ವಿಭಾಗದ ಸಾಮಾನ್ಯ ನಿಯಮಗಳು

ಶಿಸ್ತು:
ಮಗುವಿನ ಭವಿಷ್ಯದ ದೃಷ್ಟಿಯಿಂದ ಶಿಸ್ತು ಅತ್ಯಗತ್ಯವಾಗಿ ಬೇಕು. ಮಗುವು ಸ್ವತಃ ತನ್ನಲ್ಲಿ ಶಿಸ್ತನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಮಗುವಿನಲ್ಲಿ ಶಿಸ್ತನ್ನು ತರಲು ಶಿಕ್ಷಕರು ಅಗತ್ಯವಿರುವ ಕ್ರಮವನ್ನು ತೆಗೆದುಕೊಳ್ಳುವರು. ಶಿಕ್ಷಕರ ಪ್ರಯತ್ನವು ಶಾಲಾ ಆವರಣದಲ್ಲಿದ್ದು ಇದು ಯಶಸ್ವಿಯಾಗಲು ಪಾಲಕರ ಸಕ್ರಿಯವಾದ ಸಹಭಾಗಿತ್ವವು ಅವಶ್ಯಕವಾಗಿದೆ.

ಸ್ವಚ್ಚತೆ:
* ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ವೈಯಕ್ತಿಕ  ಸ್ವಚ್ಚತೆಯ ಕುರಿತು ಅರಿವಿರಬೇಕು.
* ವಿದ್ಯಾರ್ಥಿಗಳು ಸ್ವಚ್ಚತೆಯ ಕುರಿತು ಮೊದಲ ಪ್ರಾಶಸ್ತ್ಯವನ್ನು ಕೊಡಬೇಕು.
* ವಿದ್ಯಾರ್ಥಿಗಳು ಅಚ್ಚುಕಟ್ಟಾದ ಹಾಗೂ ಸ್ವಚ್ಛವಾದ ಸಮವಸ್ತ್ರ ಬೂಟು ಮತ್ತು ಕಾಲುಚೀಲಗಳನ್ನು ಧರಿಸತಕ್ಕದ್ದು.
* ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವು ಶುದ್ಧ ಹಾಗೂ ದೃಢವಾದ ಮನಸ್ಸನ್ನು ಬೆಳೆಸುವುದು. ಆದ್ದರಿಂದ ನಮ್ಮ ಸುತ್ತಮುತ್ತಲಿರುವ ಪರಿಸರದ ಸ್ವಚ್ಚತೆಯನ್ನು ಕಾಪಾಡುವುದು ಅವಶ್ಯಕವಾಗಿದೆ.
   ನಿಯಮಿತತೆ ಹಾಗೂ ಸಮಯ ಪ್ರಜ್ಞೆ:
* ತರಗತಿಯಲ್ಲಿ ವಿದ್ಯಾರ್ಥಿಗಳ ನಿಯಮಿತ ಹಾಜರಾತಿಯು ಕಡ್ಡಾಯವಾಗಿದೆ.
* ಶಾಲೆಯ ಆರಂಭದ ದಿನದಂದು ಹಾಜರಾತಿಯು ಕಡ್ಡಾಯವಾಗಿದೆ.
* ವಿದ್ಯಾರ್ಥಿಗಳು ಶಾಲೆ ಪ್ರಾರಂಭವಾಗುವ ವೇಳೆಗಿಂತ 5ನಿಮಿಷ ಮುಂಚಿತವಾಗಿ ಶಾಲೆಯಲ್ಲಿ ಹಾಜರಿರತಕ್ಕದ್ದು.
* ವಿದ್ಯರ್ಥಿಗಳು ಸಮಯ ಪ್ರಜ್ಞೆಯನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು.
* ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಪಾಲಕರ ವೈಯಕ್ತಿಕ ಜವಾಬ್ದಾರಿಯ ಮೇಲೆ ಮನೆಗೆ ಕಳುಹಿಸಲಾಗುವುದು.
* ಶಾಲೆಗೆ ಹೊಸದಾಗಿ ಪ್ರವೇಶವನ್ನು ಪಡೆದ ವಿದ್ಯಾರ್ಥಿಗಳು ಶಾಲೆ ಆರಂಭಗೊಂಡು ಒಂದು ವಾರದೊಳಗೆ ಶಾಲೆಯಲ್ಲಿ ಹಾಜರಿರಬೇಕು. ಇಲ್ಲವಾದಲ್ಲಿ ಆ ವಿದ್ಯಾರ್ಥಿಯು ಶಾಲಾ ಪ್ರವೇಶದ ಅವಕಾಶವನ್ನು ಕಳೆದುಕೊಳ್ಳುವನು.  

ರಜೆ:
* ಶಾಲೆಯ ಆರಂಭದ ದಿನ ಹಾಗೂ ಕೊನೆಯ ದಿನದಂದು ಹಾಜರಾತಿಯು ಕಡ್ಡಾಯವಾಗಿರುತ್ತದೆ.
* ಪಾಲಕರು ಮುಂಚಿತವಾಗಿಯೇ ಯೋಗ್ಯವಾದ ಕಾರಣಗಳನ್ನೊಳಗೊಂಡ ಮನವಿ ಪತ್ರಕ್ಕೆ ರಜೆಯನ್ನು ಕೊಡಲಾಗುವುದು.
* ಯಾವುದೇ ಸಾಂಕ್ರಾಮಿಕ ರೋಗಗಳಿಂದ ಬಳಲುವ ವಿದ್ಯಾರ್ಥಿಗಳು ಪೂರ್ಣವಾಗಿ ಗುಣಮುಖರಾಗಿರುವ ಕುರಿತು ವೈದ್ಯರ ಪ್ರಮಾಣ ಪತ್ರದೊಂದಿಗೆ ಶಾಲೆಗೆ ಹಾಜರಾಗತಕ್ಕದ್ದು. ಇಂತಹ ಸಂದರ್ಭದಲ್ಲಿ ಪಾಲಕರು ಮುಖ್ಯೋಪಾಧ್ಯಾಯರಿಗೆ ವರ್ಗ ಶಿಕ್ಷಕರ ಮುಖಾಂತರ ಎರಡು ದಿನಗಳ ಒಳಗಡೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
* ಸಾಂಕ್ರಾಮಿಕ ರೋಗಗಳಿಂದ ಬಳಲುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬಾರದು. ಮತ್ತು ರೋಗ ಗುಣಮುಖವಾಗುವ ಕಾಲಾವಧಿಗೂ ಮೊದಲು ಶಾಲೆಗೆ ಬಂದು ಆ ವಿಷಯವನ್ನು ನಮ್ಮ ಗಮನಕ್ಕೆ ತರದಿದ್ದಲ್ಲಿ ಆ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಲಾಗುವುದು.
* ಈ ಕೆಳಗಿನ ರೋಗವಿರುವ ಸಮಯದಲ್ಲಿ ಶಾಲೆಗೆ ಹಾಜರಾಗುವುದನ್ನು ನಿಶೇಧಿಸಲಾಗಿದೆ.
- ಸಿಡುಬು: ಎಲ್ಲಾ ಗಾಯದ ಕಲೆಗಳು ಮಾಯವಾಗುವ ತನಕ.
- ಕೋರ: ಗಾಯದ ಗುರುತು ಮರೆಯಾದ ಮೂರು ದಿನದ ತನಕ.
- ಕೆಪ್ಪಟೆ : ಬಾವು ಆಕ್ರಮಿಸಿದ ಒಂಭತ್ತು ದಿನಗಳ ತನಕ.
- ಕಾಮಾಲೆ: ಸಂಪೂರ್ಣ ಗುಣಮುಖವಾದ ಕುರಿತು ವೈದ್ಯರ ಪ್ರಮಾಣ ಪತ್ರ ದೊರೆಯುವವರೆಗೆ.
* ವೈದ್ಯಕೀಯ ಕಾರಣವನ್ನು ಹೊರತು ಪಡಿಸಿ ಇತರ ಯಾವುದೇ ಕಾರಣಕ್ಕೆ ದೀರ್ಘವಾದ ರಜೆಯನ್ನು ತೆಗೆದುಕೊಳ್ಳಲು ಮುಂಚಿತವಾಗಿ ಅನುಮತಿಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
* ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಿರುವುದು ಕಡ್ಡಾಯವಾಗಿದೆ.
* ರಜೆಯ ಅರ್ಜಿಯನ್ನು ಮುಖ್ಯೋಪಾಧ್ಯಾಯರಿಗೆ ಬರೆದು ಅದನ್ನು ವರ್ಗ ಶಿಕ್ಷಕರು ಇಲ್ಲವೆ ಶಾಲಾ ಕಾರ್ಯಾಲಯಕ್ಕೆ ಕೊಡತಕ್ಕದ್ದು.

ಹುಡುಗರ ಸಮವಸ್ತ್ರ :
* ಮಾವಿನ ಹಣ್ಣಿನ ಬಣ್ಣದ ಅಂಗಿ, ಕಡು ಕಂದು ಬಣ್ಣದ ಫುಲ್ ಪ್ಯಾಂಟ್, ಕಡು ಕಂದು ಬಣ್ಣದ ಕಂಠಪಟ್ಟಿ , ಹಾಗೂ ಕಪ್ಪು ನಡುಪಟ್ಟಿಯನ್ನು 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಧರಿಸತಕ್ಕದ್ದು.
* ಪಾದರಕ್ಷೆಗಳು:
ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ಸಾದಾ ಮಳೆಯ ಬೂಟುಗಳನ್ನು ಹಾಕಬೇಕು. ನಂತರ ಕಡು ಕಂದು ಬಣ್ಣದ  ಕ್ಯಾನ್‌ವಾಶ್ ಬೂಟು ಮತ್ತು ಕಾಲು ಚೀಲಗಳನ್ನು ಕಡ್ಡಾಯವಾಗಿ ಧರಿಸತಕ್ಕದ್ದು.

ಹುಡುಗಿಯರ ಸಮವಸ್ತ್ರ:
* ಬಿಳಿ ಮತ್ತು ಕಂದು ಬಣ್ಣದ ಚೌಕುಳಿ ಅಂಗಿ ಹಾಗೂ ಮಾವಿನ ಹಣ್ಣಿನ ಬಣ್ಣದ ಕುಪ್ಪಸ.
* ಹುಡುಗಿಯರು ತಮ್ಮ ಸಮವಸ್ತ್ರಕ್ಕಿಂತ ಚಿಕ್ಕದಾದ ಒಳಲಂಗವನ್ನು [tights] ಧರಿಸತಕ್ಕದ್ದು.
* ವಿದ್ಯಾರ್ಥಿಗಳು ಉಗುರಿಗೆ ಬಣ್ಣವನ್ನು ಹಚ್ಚುವುದು ಹಾಗೂ ಸುಗಂಧ ದ್ರವ್ಯಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.