‍ಪ್ರಾಥಮಿಕ ವಿಭಾಗದ ನಿಯಮಗಳು

ಪ್ರಾಥಮಿಕ ವಿಭಾಗದ ನಿಯಮಗಳು:


ವಿದ್ಯಾರ್ಥಿಗಳಿಗೆ ನಿಯಮಗಳು:
* ಇದು ಆಂಗ್ಲ ಮಾಧ್ಯಮ ಶಾಲೆಯಾಗಿದ್ದು ಇಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ  ಹಾಗೂ ಬಸ್ಸಿನಲ್ಲಿ ಕಡ್ಡಾಯವಾಗಿ ಇಂಗ್ಲೀಷಿನಲ್ಲಿ ಮಾತನಾಡತಕ್ಕದ್ದು.
* ವಿದ್ಯಾರ್ಥಿಗಳು ಶಾಲಾ ಕ್ಯಾಲೆಂಡರ್ ನ್ನು ದಿನಾಲೂ ತರಬೇಕು.
* ದಿನಂಪ್ರತಿ ಶಾಲಾ ಸಮವಸ್ತ್ರ ಹಾಗೂ ಗುರುತು ಪತ್ರವನ್ನು ಧರಿಸತಕ್ಕದ್ದು.
* ವಿದ್ಯಾರ್ಥಿಗಳು ಶಾಲೆಯಲ್ಲಿ ನಿಶ್ಯಬ್ದತೆಯಿಂದ ಇರತಕ್ಕದ್ದು. ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಚಲಿಸುವ ಸಂದರ್ಭದಲ್ಲಿ ಶಿಸ್ತನ್ನು ಕಾಯ್ದುಕೊಳ್ಳತಕ್ಕದ್ದು ಮತ್ತು ಒಂದೇ ಸಾಲಿನಲ್ಲಿ ಚಲಿಸತಕ್ಕದ್ದು.
* ಶಾಲಾ ಆವರಣದಲ್ಲಿ ಓಡುವುದು, ಆಡುವುದು, ಹಾಗೂ ಕಿರುಚುವುದನ್ನು ನಿಷೇಧಿಸಲಾಗಿದೆ.
* ಶಾಲಾ ಆರಂಭದ ಗಂಟೆ ಬಾರಿಸಿದಾಗ ಹಾಗೂ ಕಿರು ವಿರಾಮದ ಗಂಟೆ ಬಾರಿಸಿದಾಗ ಸಂಪೂರ್ಣವಾದ ನಿಶ್ಯಬ್ದವನ್ನು ಕಾಯ್ದುಕೊಳ್ಳತಕ್ಕದ್ದು.
* ವಿದ್ಯಾರ್ಥಿಗಳು ಹೆಚ್ಚು ಹಣವನ್ನು ಅಥವಾ ಮೌಲ್ಯಯುತವಾದ ಆಭರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಹಾಗೂ ಅದು ಕಳೆದು ಹೋದರೆ ಶಾಲೆಯು ಜವಾಬ್ದಾರರಾಗಿರುವುದಿಲ್ಲ.
* ಶಾಲಾ ಆವರಣದ ವಸ್ತುಗಳನ್ನು ಅಥವಾ ಪೀಠೋಪಕರಣಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿರಿ, ಹಾಗೂ ಅದು ಹಾಳಾದಲ್ಲಿ ತಕ್ಷಣ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಿಗೆ ತಿಳಿಸತಕ್ಕದ್ದು.