ಪ್ರೌಢ ಶಾಲಾ ವಿಭಾಗಕ್ಕೆ ಪ್ರವೇಶ

* ಹೊಸ ದಾಖಲಾತಿಯು ಲಭ್ಯವಿರುವ ಸೀಟುಗಳನ್ನು ಅವಲಂಬಿಸಿದೆ. ಇದರ ಕುರಿತು ಯಾವುದೇ ವ್ಯವಹಾರವನ್ನು ಮಾನ್ಯ ಮಾಡಲಾಗುವುದಿಲ್ಲ.

* ಶಾಲಾ ಕಾರ್ಯಕಾರಿ ಸಮಿತಿಯು ಪ್ರವೇಶವನ್ನು ಕೊಡುವ ಅಥವಾ ನಿರಾಕರಿಸುವ ಹಕ್ಕನ್ನು ಹೊಂದಿದೆ.

* ಶಾಲಾ ಪ್ರವೇಶಕ್ಕೆ ಮೂಲ ವರ್ಗಾವಣಾ ಪತ್ರವನ್ನು ಒಪ್ಪಿಸತಕ್ಕದ್ದು.

* ಬೇರೆ ಜಿಲ್ಲೆಯ ಅಥವಾ ಬೇರೆ ರಾಜ್ಯದ ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆಯುವಾಗ ಆ ಪ್ರದೇಶದ ಶಿಕ್ಷಣಾಧಿಕಾರಿಯ ಸಹಿಯೊಂದಿಗೆ ಪ್ರಮಾಣ ಪತ್ರವನ್ನು ಒಪ್ಪಿಸತಕ್ಕದ್ದು.

 

ಪ್ರವೇಶ ಹಿಂತೆಗೆತ:

* ಶಾಲೆಯನ್ನು ಬಿಡುವ ವಿದ್ಯಾರ್ಥಿಯು ಆ ತಿಂಗಳ ಶಾಲಾ ಶುಲ್ಕವನ್ನು ತುಂಬಿ ಶಾಲೆಯು ಒದಗಿಸುವ ಅರ್ಜಿಯನ್ನು ಸರಿಯಾಗಿ ತುಂಬತಕ್ಕದ್ದು.

* ಪಾಲಕರು ಶಾಲಾ ವರ್ಗಾವಣಾ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸುವ ಮೊದಲು ಶಾಲಾ ಶುಲ್ಕವನ್ನು ತುಂಬತಕ್ಕದ್ದು.