ಶೈಕ್ಷಣಿಕ‍

ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಸತತ ಸಮಗ್ರ ಮಾದರಿಯನ್ನು ಅಳವಡಿಸಿ, ನಿಯಮಿತ ಕಲಿಕಾ ಪರೀಕ್ಷೆ ಹಾಗೂ ಅಭಿವೃದ್ಧಿಯನ್ನು ಅಳೆಯುವ ಪರೀಕ್ಷೆಗಳನ್ನು ಏರ್ ‍ಡಿಸಿ ಮೌಲ್ಯ ಮಾಪನವನ್ನು ಮಾಡಲಾಗುತ್ತದೆ. ಬರೆಹ ಸಂವಹನ ಹಾಗೂ ನೈಪುಣ್ಯತೆಯನ್ನು ಈ ಕಾರ್ಯ ವಿಧಾನವು ಒಳಗೊಂಡಿದೆ. ಅಲ್ಪಾವಧಿಯಲ್ಲಿ ಏರ್ಪಡಿಸುವ ಘಟಕ ಪರೀಕ್ಷೆಯು ಪ್ರಕ್ರಿಯೆ ಬೋಧನೆ ಕಲಿಕೆಯ ಮುಖ್ಯ ಅಂಗವಾಗಿದೆ. ಇಂತಹ ಪರೀಕ್ಷೆಯಿಂದ ವಿದ್ಯಾರ್ಥಿಗಳ ಅಂಕೆ ಸಂಖ್ಯೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನವನ್ನು ಕೊಡಲು ಸಹಾಯ ಮಾಡುತ್ತದೆ.

 

ಫಲಿತಾಂಶ:

ಶಾಲೆಯು ಸತತವಾಗಿ ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಹಾಗೂ ಉಚ್ಛ ಮಾಧ್ಯಮಿಕ ಶಿಕ್ಷಣ ಮಂಡಳಿಯವರು ಏರ್ಪಡಿಸುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ.

 

ಎಸ್.ಎಸಿ.ಸಿ. ಪಲಿತಾಂಶ 2007-08 ರಿಂದ

ಆಂಗ್ಲ ಮಾಧ್ಯಮ ಕನ್ನಡ ಮಾಧ್ಯಮ

 

ಕ್ರ.ಸಂಖ್ಯೆ

ವರ್ಷ

ಪರೀಕ್ಷೆಗೆ

ಹಾಜರಾದವರು

ಫೇಲಾದ ವಿದ್ಯಾರ್ಥಿಗಳು

ತೇರ್ಗಡೆಗೊಂಡವರು

ಶೇ. ಫಲಿತಾಂಶ

ಪರೀಕ್ಷೆಗೆ

ಹಾಜರಾದವರು

ಫೇಲಾದ ವಿದ್ಯಾರ್ಥಿಗಳು

ತೇರ್ಗಡೆಗೊಂಡವರು

ಶೇ. ಫಲಿತಾಂಶ

1.

2008

118

00

118

100

45

01

44

97

2.

2009

112

02

110

98

62

00

62

100

3.

2010

115

01

114

99

47

00

47

100

4.

2011

96

03

93

97

44

00

44

100

5.

2012

100

00

100

100

46

00

46

100

 

ವಿಶೇಷವಾದ ಗಮನ ಮತ್ತು ಪರಿಹಾರ ಬೋಧನೆ:

ಒಂಭತ್ತನೇ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷವಾದ ತರಬೇತಿಯನ್ನು ನೀಡುತ್ತಿದೆ. ಒಂಭತ್ತನೇ ತರಗತಿಯಲ್ಲಿ ಶೇ. 80ಪ್ರತಿಶತ ತೆಗೆಯುವ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯಲ್ಲಿ ಇನ್ನಷ್ಟು ಹೆಚ್ಚಿನ ಅಂಕಗಳನ್ನು ತೆಗೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಅದೂ ಅಲ್ಲದೆ ಶ್ರೇಷ್ಠ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯಲ್ಲಿ ಉತ್ಕೃಷ್ಟವಾದ ಸಾಧನೆಯನ್ನು ಮಾಡಲು ಶಿಕ್ಷಕರು ಹೆಚ್ಚಿನ ಪರಿಶ್ರಮವನ್ನು ಹಾಗೂ ವಿಶೇಷವಾದ ತರಗತಿಗಳನ್ನು ತೆಗೆದುಕೊಳ್ಳುವರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಪರಿಹಾರ ಬೋಧನೆ ಹಾಗೂ ಸಮಾಲೋಚನೆಯ ಮುಖಾಂತರ ವಿದ್ಯಾರ್ಥಿಗೆ ಮಾನಸಿಕ ಮತ್ತು ಬೌದ್ಧಿಕ ಬೆಂಬಲವನ್ನು ನೀಡುತ್ತಿದೆ. ಪರಿಹಾರ ಬೋಧನಾ ತರಗತಿಯು ದಿನಂಪ್ರತಿ ಮಧ್ಯಾಹ್ನ ೧ ರಿಂದ ೪ ಗಂಟೆಯವರೆಗೆ ನಡೆಯುತ್ತಲಿದೆ. ಅದೂ ಅಲ್ಲದೆ ದೀಪಾವಳಿ ಹಾಗೂ ಕ್ರಿಸ್‌ಮಸ್‌ ರಜೆಯಲ್ಲೂ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಜರುಗಿಸಲಾಗುತ್ತಿದೆ.